Tuesday, October 22, 2013

ನೆಲ್ಲಿಕಾಯಿ ಸಾರು

ನೆಲ್ಲಿಕಾಯಿ ಸಾರು

ಬೆಳಿಗ್ಗೆ ಮಧ್ಯಾನ್ಹ ಮತ್ತು ಸಾಯಂಕಾಲ ಹಾಗೂ ರಾತ್ರಿ ! ಕರ್ನಾಟಕದ ಅನೇಕ ಭಾಗಗಳಲ್ಲಿ (ಬೆಂಗಳೂರು ಬಿಟ್ಟು)ಈಗ ನಾಲ್ಕೂ ಹೊತ್ತು ಮಳೆಯದ್ದೇ ದರ್ಬಾರು. ಇದರೊಂದಿಗೆ ಅದೂ ಇದೂ ಕಾಯಿಲೆ ಕಸಾಲೆಗಳು. ಆರೋಗ್ಯ ವರ್ಧನೆಗೆ ಮತ್ತು ಬಾಯಿ ರುಚಿಗೆ ಇಗೊಳ್ಳಿ ಇಲ್ಲಿದೆ ನೆಲ್ಲಿಕಾಯಿ ಸಾರು. ನೆಲ್ಲಿಕಾಯಿಯಲ್ಲಿನ ವೈಟಮಿನ್ ಸಿ ಅಂಶ ಥಂಡಿಯಿಂದ ಜಡ್ಡುಗಟ್ಟಿದ ನಾಲಿಗೆಯನ್ನು ಶುಚಿಯಾಗಿಸುತ್ತದೆ. ಅನ್ನದ ಜತೆ ಬಿಸಿ ಬಿಸಿಯಾಗಿ ಸಾರಿನ ಊಟ ಮಾಡಿ. ಪ್ರತೀಕೂಲ ಹವಾಮಾನಕ್ಕೆ ತಕ್ಕ ಉತ್ತರ ನೀಡಿ.

ಬೇಕಾಗುವ ಸಾಮಾನು 

1) ನೆಲ್ಲಿಕಾಯಿ : 3 ಅಥವಾ 4

2) ತೆಂಗಿನ ತುರಿ : 2 ದೊಡ್ದ ಚಮಚ

3) ಹುರಿದ ಕೆಂಪು ಮೆಣಸು : 2 ಸಾಕು

4) ಹುಣಸೆ ಹುಳಿ : ಚಿಕ್ಕದು

5) ತುಪ್ಪದಲ್ಲಿ ಸ್ವಲ್ಪ ಹುರಿದ ಜೀರಿಗೆ ಇಂಗು
ಉಪ್ಪು ಬೆಲ್ಲ : ರುಚಿಗೆ ತಕ್ಕಷ್ಟು. ಸಾಸಿವೆ ಕರಿಬೇವು ಒಗ್ಗರಣೆಗೆ ಬೇಕೇಬೇಕು.
ಮಾಡುವ ವಿಧಾನ ನೆಲ್ಲಿಕಾಯಿಯನ್ನು ನೀರಿನಲ್ಲಿ ಬೇಯಿಸಿ ಬೀಜ ತೆಗೆದಿಡಿ. ಈ ನೀರನ್ನು ಸಾರಿಗೆ ಬಳಸಬಹುದು.ಆಮೇಲೆ
:-)
ನಂ 1ರಿಂದ 5ರವರೆಗೆ ಪಟ್ಟಿಮಾಡಿದ ಸಾಮಾನುಗಳನ್ನು ನುಣ್ಣಗೆ ರುಬ್ಬಿ. ಬೇಕಾದಷ್ಟು ನೀರು ಸೇರಿಸಿ, ಅದಕ್ಕೆ ಉಪ್ಪು, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಒಗ್ಗರಣೆ ಹಾಕಿ. ಸಾರು ತಯಾರು. ಬಾಯಲ್ಲಿ ನೀರೂರಿಸುವ ಈ ಸಾರನ್ನು ಅನ್ನಕ್ಕೆ ಸೇರಿಸಿ ಸೇವಿಸಬಹುದು. ಹಾಗೇ ಕುಡಿಯಲೂ ಇದು ಚೆನ್ನಾಗಿರುತ್ತದೆ.

ಬಿರು ಬೇಸಿಗೆಯಲ್ಲಿ. ರುಬ್ಬಿದ 1 ರಿಂದ 5 ಪದಾರ್ಥಕ್ಕೆ ತೆಳು ಮಜ್ಜಿಗೆ ಸೇರಿಸಿ, ಕುಡಿಯಬಹುದು. {ಕೆಂಪು ಮೆಣಸು (optional)}
(nellikaayi chitra courtesey The world wide web)

No comments: