Tuesday, October 22, 2013

ಗೋವಾ ಸ್ಪೆಷಲ್ ಭಾಜಿ ಪೂರಿ

ನನ್ನ ಬ್ರದರ್ ಇನ್ ಲಾ ಯು ಎಸ್ ನಿಂದ ಬಂದಾಗ ಏನಾದರೂ ಹೊಸತನ್ನು ಮಾಡುವ ಅಂತ, ಮೊದಲ ಬಾರಿಗೆ ಈ ತಿನಿಸನ್ನು ಮಾಡಿದೆ. ಗೋವಾ ದ ರುಚಿ ಬರಲಿಲ್ಲ. ಆದರೂ ಒಂತರಹ ಚೆನ್ನಾಗಿತ್ತು ಅನ್ನಲಿಕ್ಕೆ ಏನಡ್ಡಿಯಿಲ್ಲ. ಶ್ರೀಕಾಂತ ನನಗೆ on a scale of 1 to 5....3.8 ಅಂಕಗಳನ್ನು ಕೊಟ್ಟರು. :-(
ಚಿಕ್ಕವಳಿದ್ದಾಗ( ಮತ್ತು ಈಗಲೂ) ಎಲ್ಲರೂ ಗೋವಾಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗುತ್ತಿದ್ದರೆ ನನಗೆ ಅಲ್ಲಿನ ಮೈನ್ attraction ದೇವಸ್ಥಾನದ ಅಕ್ಕ ಪಕ್ಕ ಇರುವ ಸಣ್ಣ ಸಣ್ಣ ಹೋಟಲ್ ನಲ್ಲಿ ಕೊಡುವ ಉಂಡೆ ಪಾವ್ ಭಾಜಿ . ಇಲ್ಲಿ ಭಾಜಿ ಅಂದರೆ ಒಂದು ಸುಖಾ (dry) ಭಾಜಿ, ಒಂದು ಪಾತಳ್ (liquidy) ಭಾಜಿ.
ಈ ಸಲ ಫೋಟೊ ನಾನೆ ತೆಗೆದದ್ದು....:-) ತಿಂಡಿ ತಿಂದು ಆಗಿರಲಿಲ್ಲ ಅದಕ್ಕೆ ಹೋಕಸ್ ಫೋಕಸ್ ಆಗಿದೆ
ಸುಖಾ ಭಾಜಿ ಅಲೂಗಡ್ಡೆಯಿಂದ ಮಾಮೂಲಿ ನಾವು ಹೇಗೆ ಮಾಡ್ತೇವೋ ಹಾಗೆ..
for ಪಾತಳ್ ಭಾಜಿ
fresh ಬಟಾಣಿ..(ಇಲ್ಲದಿದ್ದರೆ ಬಟಾಣಿಯನ್ನು ಹಿಂದಿನ ದಿನ ರಾತ್ರಿ (ಬೆಳಿಗ್ಗೆಗೆ ಮಾಡೋದಾದರೆ) ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಕುಕ್ಕರ್ ನಲ್ಲಿ ಒಂದು ವಿಹ್ಸಲ್ ತೆಗೆಯಿರಿ)
for the masala:
ಎರಡು ದೊಡ್ಡ ಸ್ಪೂನ್ ತುರಿದ ಕೊಬ್ಬರಿ, ಎರಡು ಕೆಂಪು (ಒಣ) ಮೆಣಸು, ಅರ್ಧ ಟೀ ಸ್ಪೂನ್ ಕೊತ್ತಂಬರಿ ಬೀಜ, 5-6 ಕರಿಮೆಣಸು (pepper), ಕಾಲು ಇಂಚ್ ದಾಲ್ಚಿನಿ ತುಂಡು. ಎಣ್ಣೆಯಲ್ಲಿ ಇವೆಲ್ಲವನ್ನು ಹುರಿಯಿರಿ. ತಣ್ಣಗಾದ ಮೇಲೆ ಮಿಕ್ಸಿ ನಲ್ಲಿ ಹುಣಸೆ ಹಣ್ಣಿನ ಜತೆ ಇವನ್ನು ಹಾಕಿ ರುಬ್ಬಿ. ಈ ಮಿಶ್ರಣವನ್ನು ಬೆಂದ ಬಟಾಣಿ ಕಾಳಿಗೆ ಬೆರೆಸಿ, ಉಪ್ಪು ಸೇರಿಸಿ, ಐದು ನಿಮಿಷ ಕುದಿಸಿ....ಭಾಜಿ ರೆಡಿ....(ಗಮನಿಸಿ ಈ ಭಾಜಿಗೆ ನೀರುಳ್ಳಿ ಬೆಳ್ಳುಳ್ಳಿ ಇಲ್ಲ. ನೀರುಳ್ಳಿ ಬೇಕಿದ್ದಲ್ಲಿ ಒಂದು medium size ನೀರುಳ್ಳಿಯನ್ನು ಕತ್ತರಿಸಿ ಎಣ್ಣೆಯಲ್ಲಿ ಕೆಂಪಗೆ ಹುರಿದು ಅದನ್ನು ಮಸಾಲೆಯೊಂದಿಗೆ ಮಿಕ್ಸಿಯಲ್ಲಿ ಹಾಕ ಬೇಕು...)
ಪೂರಿ ಮಾಡುವುದು ಎಲ್ಲರಿಗೂ ಗೊತ್ತು...

No comments: