Tuesday, October 22, 2013

ಡೊಕ್ಲಾ/Dhokla/ ಡೊಕಲಾ

1ಕಪ್ - ಬೇಸನ್/ಕಡ್ಲೆ ಹಿಟ್ಟು
1 ಕಪ್- ಬಾಂಬೆ ರವಾ
2 ಕಪ್ - ಮೊಸರು
1/2 ಟೀ. ಸ್ಪೂನ್ ಅರಿಸಿನ ಪುಡಿ
1/4 ಇಂಚ ಶುಂಠಿ ಮತ್ತು ಎರಡು ಹಸಿಮೆಣಸಿನಕಾಯಿಯಿಂದ ಮಾಡಿದ ಪೇಸ್ಟ್
1 ಟೀ.ಸ್ಪೂನ್ Eno fruit salt
1/2 ಲಿಂಬೆಹಣ್ಣಿನ ರಸ
ರುಚಿಗೆ ಉಪ್ಪು, ಒಂದು ಸ್ಪೂನ್ ಸಕ್ಕರೆ,  ೨ ಟೀ ಸ್ಪೂನ್ ಅಡಿಗೆ ಎಣ್ಣೆ, ಒಗ್ಗರಣೆಗೆ : ಎಣ್ಣೆ, ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ,ಜೀರಿಗೆ, ಹಿಂಗು. ಅಲಂಕರಿಸಲು (garnishing)  ಕೊತ್ತಂಬರಿ ಸೊಪ್ಪು, ತಾಜಾ ತೆಂಗಿನಕಾಯಿ ತುರಿ
ಮಾಡುವ ವಿಧಾನ:
ಕಡಲೆ ಹಿಟ್ಟಿಗೆ  ರವೆ ಮತ್ತು ಮೊಸರನ್ನು ಬೆರೆಸಿ ಗಂಟಾಗದಂತೆ ಕಲಿಸಿ. (ಇಡ್ಲಿ ಹಿಟ್ಟಿನ ಹದ). ಬೇಕಾದರೆ ಮಾತ್ರ ನೀರು ಬೆರೆಸಿ.ಉಪ್ಪು ಸಕ್ಕರೆ , ಅರಿಸಿನ ಪುಡಿ,ಶುಂಠಿ-ಮೆಣಸಿನಕಾಯಿ ಪೇಸ್ಟ್, ನಿಂಬೆ ರಸ ಹಾಗೂ ಎಣ್ಣೆ ಬೆರೆಸಿ ಹತ್ತು ನಿಮಿಷ ಇಡಿ. 

ಇಡ್ಲಿ ಕುಕ್ಕರ್ ನಲ್ಲಿ ನೀರು ಬಿಸಿ ಮಾಡಲು ಇಡಿ. ನೀರು ಹಬೆಯಾಡುತ್ತಿರಬೇಕಾದ್ರೆ ಕಲಿಸಿದ ಹಿಟ್ಟಿಗೆ eno fruit salt  ಬೆರೆಸಿ.


ಹಿಟ್ಟು ನೊರೆನೊರೆಯಾಗಿ ಮೇಲೆ ಬರುತ್ತದೆ. ಈಗ ಹಿಟ್ಟನ್ನು ಎಣ್ಣೆ ಹಚ್ಚಿದ ಪಾತ್ರೆಗೆ ಕೂಡಲೆ ವರ್ಗಾಯಿಸಿ(ದೊಡ್ಡ ದಾದ ಪಾತ್ರೆಯನ್ನೆ  ಬಳಸಿ.) ಕೂಡಲೆ ಹಬೆಪಾತ್ರೆಯಲ್ಲಿ ಇಟ್ಟು 15 ನಿಮಿಷ ಬೇಯಿಸಿ--
ಹಬೆ ಪಾತ್ರೆಯಿಂದ ಹೊರಗೆ ತೆಗೆದಿದ್ದು
ಪಾತ್ರೆ ಹೊರಗೆ ತೆಗೆದು ಅದು ತಣಿದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಢೊಕ್ಲಾ ಕತ್ತರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು, ಜೀರಿಗೆ, ಹಿಂಗು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಕೊಡಿ. ಇದರಲ್ಲಿ ಕತ್ತರಿಸಿದ ಢೋಕ್ಲಾಗಳನ್ನು ಹಾಕಿ. ಅರ್ಧ ಗ್ಲಾಸ್ ನೀರು ನಿಧಾನವಾಗಿ ಎಲ್ಲ ಧೋಕ್ಲಾಗಳ ಮೇಲೆ ಬರುವಂತೆ ಸಿಂಪಡಿಸಿ. ಪ್ಲೇಟ್ ಗೆ ರವಾನಿಸಿ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ
ಢೊಕಲಾ - ಗುಜರಾತಿ ತಿನಿಸು ready
too many cooks spoil the broth ಅನ್ನುತ್ತಾರೆ. ಆದರೆ ನಾವು ಮೂರು ಜನ ಸೇರಿ ಮಾಡಿದ ಢೋಕ್ಲ , ಮೊದಲನೇ ಪ್ರಯತ್ನದಲ್ಲೇ ಹಿಟ್. ಟೇಸ್ಟೂ ಸೂಪರ್. ಅರಸಿನ ಪುಡಿ ಸ್ವಲ್ಪ ಕಡಿಮೆಯಾಯ್ತು ಅಷ್ಟೆ.
ಕೊತ್ತಂಬರಿ ಸೊಪ್ಪಿನ ಚಟ್ನಿ ಜತೆಗೆ serve ಮಾಡಿ. 

ಇನೋ ಫ್ರುಟ್ ಸಾಲ್ಟ್ ಕಿರಾಣಿ ಅಂಗಡಿ/ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯ.

No comments: