Tuesday, October 22, 2013

ಬಾಳೆ ಎಲೆ ಕಡುಬು

ಒಂದು ಕಪ್ ಉದ್ದಿನ ಬೇಳೆ ಗೆ ಎರಡು ಕಪ್ ಅಕ್ಕಿ ರವೆ/3 ಕಪ್ ಬಾಂಬೆ ರವಾ
ಉದ್ದಿನ ಬೇಳೆ ರುಬ್ಬೋಕಲ್ಲು ಅಥವ ಗ್ರೈಂಡರ್ ನಲ್ಲಿ ರುಬ್ಬಿದರೆ ನಿಮಗೆ soft ಇಡ್ಲಿ ಅಥವ ಕಡಬು ಮಾಡಲಿಕ್ಕೆ ಆಗುತ್ತದೆ. ಕೈಗೆಟಕುವ ಬೆಲೆಗೆ ಟೇಬಲ್ ಟಾಪ್ ಗ್ರೈಂಡರ್ ಸಿಗುತ್ತೆ. ಇಡ್ಲಿ ದೋಸೆಗೆ ಇದು ಉತ್ತಮ.
ಉದ್ದಿನ ಬೇಳೆ ರುಬ್ಬಿದ ಎರಡು ಮೂರು ಗಂಟೆ ನಂತರ ಅಕ್ಕಿ ರವೆ ಬೆರೆಸಿ. ಮೊದಲೆಲ್ಲ ಅಕ್ಕಿ ರುಬ್ಬಿ ಅಥವ ಅಕ್ಕಿಯನ್ನು ಎರಡು ಗಂಟೆ ನೆನೆಕಾಕಿ, ಆಮೇಲೆ ನೀರಲ್ಲ ಬಸಿದು ಅದನ್ನು ಬಟ್ಟೆ ಮೇಲೆ spread ಮಾಡಿ, ಅದು ಒಣಗಿದ ಮೇಲೆ ಅದರ ರವೆ ಮಾಡಿ ಬೆರೆಸುವುದಿತ್ತು ನಾನು. ಈಗ ಎಲ್ಲ ರೆಡಿ ಸಿಗುತ್ತೆ. ಮಂಗಳೂರು ಸ್ಟೋರ್ಸ್ ನಲ್ಲಿ ಬೆಳ್ತಿಗೆ ಅಕ್ಕಿ ರವೆ ಸಿಗುತ್ತೆ. ಆಫಿಸ್ ಗೆ ಹೋಗುವವರಿಗೆ ಇದರಿಂದ ಅನುಕೂಲ. ( ಕುಚ್ಚಲಕ್ಕಿ ರವೆ ಬೆರೆಸಿ ಕೂಡ ಕಡುಬು ಮಾಡಬಹುದು ಆದರೆ ಕೆಲವರಿಗೆ ಅದರ ಪರಿಮಳ ಹಿಡಿಸುವುದಿಲ್ಲ.)
ವಿ.ಸೂ: ಬಾಂಬೆ ರವಾ ಬೆರೆಸುವುದಾದರೆ ಬಾಂಬೆರವೆಯನ್ನು ಒಂದು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ಹಬೆ ಮೇಲೆ 15 ನಿಮಿಷ ಬೇಯಿಸಿ. ಕೂಡಲೆ ಹೊರಗೆ ತೆಗೆದು ಆರಲು ಬಿಡಿ. ಪೂರ್ತಿ ಆರಿದ ಮೇಲೆ ಕೈನಿಂದ ರವೆಯನ್ನು ಉದುರುದುರಾಗಿಸಿ ಅದನ್ನು ಉದ್ದಿನ ಹಿಟ್ಟಿಗೆ ಬೆರೆಸಿ.
ಅಕ್ಕಿ ರವೆ ನೀರಿನಲ್ಲಿ ಎರಡು  ಗಂಟೆ ನೆನೆಸಿ ಆಮೇಲೆ ಅದರ ನೀರೆಲ್ಲ ಬಸಿದು ಉದ್ದಿನ ಹಿಟ್ಟಿಗೆ ಬೆರೆಸಿ.
ಮರು ದಿನ ಹಬೆಪಾತ್ರೆಯಲ್ಲಿ ನೀರು ಇಟ್ಟು ಬಿಸಿ ಮಾಡಲು ಇಡಿ. ಅದರಲ್ಲಿ ಬಾಳೆ ಎಲೆಯನ್ನು ಚೆನ್ನಾಗಿ spread ಮಾಡಿಡಿ. ನೀರು ಮರಳಲು (boiling) ಶುರು ಆದಾಗ ಹಿಟ್ಟನ್ನು ಹಾಕಿ.

ಹಿಟ್ಟು ಬೆಂದು ದುಪ್ಪಟ್ಟು ಆಗುವ ಸಾಧ್ಯತೆಗಳಿರುವುದುದರಿಂದ ಪಾತ್ರೆಯ ಅರ್ಧದಷ್ಟೆ ಹಿಟ್ಟು ಹಾಕಿ. ಹದಿನೈದು ನಿಮಿಷ ಬೇಯಿಸಿ. ಕಡಬು ರೆಡಿ.

 ಚಟ್ನಿ, ಬೆಣ್ಣೆ ಅಥವ ಆಲುಗಡ್ಡೆಯ ತೆಳು ಪಲ್ಯ ಚೆನ್ನಾಗಿರತ್ತೆ.
ಕಡುಬು, ಸಾಂಬಾರ, ಶುಂಠಿ ಹಾಕಿದ ಕೆಂಪು ಖಾರ ಚಟ್ನಿ ಮತ್ತು ತಾಜಾ ತಾಜಾ ಬೆಣ್ಣೆ
FB ನಲ್ಲಿ ಪೋಸ್ಟ್ ಮಾಡಿದ ಕಡುಬಿನ ಚಿತ್ರ ನೋಡಿದ ನನ್ನ ಬ್ಲಾಗ್ ಓದುಗರು, ಇದರ ರೆಸಿಪಿ ಇಲ್ಲಿ ಹಾಕಲು ಸಲಹೆ ನೀಡಿದ್ದರು..ಈ ಪೋಸ್ಟ್ ಅವರಿಗೆ...

No comments: