Tuesday, October 22, 2013

ಮಾವಿನ ಕಾಯಿ ಅನ್ನ/ಮ್ಯಾಂಗೋ ರೈಸ್

ಈಗಿನ್ನು ಬೇಸಿಗೆ ರಜೆ. ಟ್ರಿಪ್ ಟೂರ್ ಅಂತೂ ಇದ್ದೆ ಇರುತ್ತೆ. ಈ ಸಲ ಎಲ್ಲಾದರೂ ಟ್ರಿಪ್ ಹೋದರೆ ಮಾವಿನಕಾಯಿ ಚಿತ್ರಾನ್ನ ಮಾಡಿಕೊಂಡು ಹೋಗಬಹುದು. ಬಿಸಿ ಅಥವ ತಣ್ಣಗೆ ಹೇಗೆ ತಿಂದರೂ ಟೇಸ್ಟೀ.

ಇತ್ತೀಚೆಗೆ ನಾನು ಫೀಡ್ ಜಿಟ್ ಟ್ರ್ಯಾಕರ್ ಹಾಕ್ಕೊಂಡಿದ್ದೇನೆ ಬ್ಲಾಗ್ ಗೆ. ಎರಡು ಮೂರು ದಿನ ಒಟ್ಟೊಟ್ಟಿಗೆ ರಜೆ ಬಂದಾಗಲೆಲ್ಲಾ ಜಾಲಿಗರು search ನಲ್ಲಿ 'ನಂದಿ ಬೆಟ್ಟ' 'ಹಿಮವದ್ ಗೋಪಾಲಸ್ವಾಮಿ' 'ಮೈಸೂರು’ ಎಲ್ಲ ಹಾಕ್ಕೊಂಡು,ನನ್ನ ಬ್ಲಾಗ್ ಗೆ ಬಂದು ಹೋಗ್ತಾರೆ. ಆದ್ದರಿಂದ ಇದು especially ಅವರಿಗಾಗಿ. ಬ್ಯಾಚುಲರ್ಸ್,ಫೋರ್ಸ್ಡ್ / married ಬ್ಯಾಚುಲರ್ಸ್ ಗಳು ಕೂಡ ಅತ್ಯಂತ ಸುಲಭವಾಗಿ ಈ ಮಾವಿನಕಾಯಿ ಚಿತ್ರಾನ್ನ ತಯಾರಿಸಬಹುದು.

ಬೆಳಿಗ್ಗೆ ಬೆಳಿಗ್ಗೆ ಹೊರಡ ಬೇಕಾದ್ರೆ. ಮತ್ತು ಅನ್ನ ಬಿಸಿಯಾಗಿದ್ರೆ ನಾನು ಅನ್ನವನ್ನು ಫ್ರೀಜ಼ರ್ ನಲ್ಲಿ ಹಾಕಿಡುತ್ತೇನೆ. ಬೇಗ ತಣ್ಣಗಾಗುತ್ತೆ. ಆಮೇಲೆ ಯಾವುದಾದರೂ ರೈಸ್ ಐಟಮ್ (ಚಿತ್ರಾನ್ನ, ಪುಳಿಯೋಗರೆ, ಕೊಕೋನಟ್ ರೈಸ್. ಮಾವಿನಕಾಯಿ ಸಿಗೋದಾದ್ರೆ mango rice etc)ಮಾಡಲು ಉಪಯೋಗಿಸುತ್ತೇನೆ. ನನ್ನ ಫ್ರಿಜ್ ಗೂ ನನ್ನ ಮದುವೆ ಆದಷ್ಟೆ ವಯಸ್ಸು. ಇನ್ನೂ ನನ್ನ ಕಾಟ ತಾಳಿಕೊಂಡಿದೆ ಪಾಪ. ಒಂದು ದಿನ ರಿಪೇರಿಗೂ ಹೋಗಿಲ್ಲ. proud of you dear refrigerator :-)

ಬೇಕಾಗುವ ಸಾಮಗ್ರಿ

1 ದೊಡ್ಡ ಮಾವಿನಕಾಯಿ like ತೋತಾಪುರಿ, ತೊಳೆದು ವರಸಿ, ತುರಿದು ,ಇದಕ್ಕೆ ಸ್ವಲ್ಪ ಉಪ್ಪು ಸಕ್ಕರೆ ಬೆರೆಸಿಡಿ.

ಬಾಣಲೆಯಲ್ಲಿ ಅರ್ಧ ಸ್ಪೂನ್ ಮೆಂತೆ, ಅರ್ಧ ಸ್ಪೂನ್ ಜೀರಿಗೆ, ಸಣ್ಣ ತುಂಡು ಹಿಂಗು ಎಣ್ಣೆ ಹಾಕದೆ ಹುರಿದು, ತಣ್ಣಗಾದ ನಂತರ ಪುಡಿ ಮಾಡಿದಿ

ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಿನ ಬೇಳೆ, ಕಡಲೆ ಬೇಳೆ,ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ ಒಗ್ಗರಣೆ ಹಾಕಿ. ಇದಕ್ಕೆ ಸ್ವಲ್ಪ ಶೆಂಗಾ ಹಾಕಿ ಇನ್ನೂ ಸ್ವಲ್ಪ ಹೊತ್ತು ಹುರಿಯಿರಿ. ಅರಸಿನ ಪುಡಿ ಮತ್ತು ಪುಡಿಮಾಡಿಟ್ಟ ಪದಾರ್ಥ ಬೆರೆಸಿ. ಇದಕ್ಕೆ ಮಾವಿನಕಾಯಿ ತುರಿ ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಿ, ಅನ್ನ ಬೆರೆಸಿ. ಉಪ್ಪು ಹಾಕಿ.ಚೆನ್ನಾಗಿ ಕಲೆಸಿ.ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪು , fresh ಕಾಯಿ ತುರಿ ಹಾಕಬಹುದು

ರುಚಿ ರುಚಿಯಾದ ಮಾವಿನಕಾಯಿ ಚಿತ್ರಾನ್ನ ರೆಡಿ.

No comments: