Tuesday, October 22, 2013

ಮಜ್ಜಿಗೆ ಕಡಿ ಮತ್ತು ವಡಿ

ಹಿಂದಿನ ವಾರ ಮನೆಯಲ್ಲಿ ಕೋಲ್ಡ್, ಗಂಟಲು ನೋವು ಕೆಮ್ಮು ಅಂತ ನನ್ನ ಬಳಿ ಮಜ್ಜಿಗೆ stock ಸುಮಾರು ಉಳ್ಕೊಂಡಿತ್ತು ಫ್ರಿಜ್ ನಲ್ಲಿ. ಹೀಗೆ ಸುಮಾರು ದಿನ ಮಜ್ಜಿಗೆ ಸ್ಟಾಕ್ ಆದಾಗೆಲ್ಲ ಈ ಕಡಿ ಮಾಡುತ್ತೇನೆ. ನನ್ನ ಫೇವರಿಟ್ ಹಾಗೂ ಒಂದು ತುತ್ತು ಹೆಚ್ಚೇ ಊಟ ಒಳಸೇರುತ್ತೆ.
ಮಜ್ಜಿಗೆ (ಹುಳಿಯಾದಷ್ಟು ಹೆಚ್ಚು ರುಚಿ) 4ಗ್ಲಾಸ್, ಅರ್ಧ ಟೀ ಸ್ಪೂನ್ ಕಡಲೆ ಹಿಟ್ಟು ಹಾಕಿ ಗಂಟಾಗದಂತೆ ಮಿಶ್ರ ಮಾಡಿದಿ
ಎಣ್ಣೆಯಲ್ಲಿ ಜೀರಿಗೆ, ಸಾಸಿವೆ, ಕರಿಬೇವು, ಎರಡು ಬೆಳ್ಳುಳ್ಳಿ ಎಸಳು, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಒಂದು ಒಣಮೆಣಸಿನಕಾಯಿ, ಸ್ವಲ್ಪ ಅರಿಶಿನ ಪುಡಿ (ಲಭ್ಯವಿದ್ದಲ್ಲಿ ಎರಡು- ಮೂರು ಮೆಂತೆ ಎಲೆ ಅಥವ ಕಾಲು ಟಿಸ್ಪೂನ್ ಕಸೂರಿ ಮೇಥಿ) ಹಾಕಿ ಒಗ್ಗರಣೆ ತಯಾರು ಮಾಡಿಕೊಳ್ಳಿ. ಇದಕ್ಕೆ ಮಜ್ಜಿಗೆಯನ್ನು ಬೆರೆಸಿ. ಒಂದು ಕುದಿ ಬರೆಸಿ ಕೆಳಗಿಡಿ. ಕೊತ್ತಂಬರಿ ಸೊಪ್ಪು ಉದುರಿಸಿ
ವಡಿ:
usually ನಾನು ದೊಣ್ಣ ಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿ ಅದರ ಬೋಂಡಾ ಮಾಡಿ, ಕಡಿ ಬಡಿಸುವ ಮುನ್ನ ಅದನ್ನು ಕಡಿಯಲ್ಲಿ ಬೆರೆಸುವುದು.
ಈ ಸಲ ಸ್ವಲ್ಪ ಬೇರೆ ತರಹ ವಡಿ ಮಾಡಿದೆ
ಬೆಂಡೆಕಾಯಿ, ಹಸಿಮೆಣಸಿನಕಾಯಿ, ನೀರುಳ್ಳಿ, ದೊಣ್ಣಮೆಣಸು ಇವೆಲ್ಲವನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಉಪ್ಪು ಹಚ್ಚಿಟ್ಟೆ. ಸ್ವಲ್ಪ ಸಮಯಕ್ಎ ನೀರು ಬಿಟ್ಟಿತು. ಈ ನೀರಿಗೆ ಬೇಕಾದಷ್ಟೆ ಬೇಸನ/ಕಡಲೆಹಿಟ್ಟು ಬೆರೆಸಿ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಬೋಂಡ ಕರೆದಿಟ್ಟೆ. ಬೆಂಡೆಕಾಯಿಯಿಂದ ಬೋಂಡ ಕ್ರಿಸ್ಪ್ ಆಯ್ತು ಮತ್ತು ನೀರುಳ್ಳಿಯಿಂದ ಒಳ್ಳೆ ಪರಿಮಳ. ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು. ಇನ್ನು ನೀವು ಟ್ರೈ ಮಾಡಿ ನನಗೆ ಹೇಳಿ
ನಾನಂತು ಆಗಾಗ ಇದನ್ನು ಮಾಡ್ತಿರ್ತೀನಿ.
:-)

No comments: