Tuesday, October 22, 2013

ಪಡವಲ್ ಕಾಯಿ ಬೀಜದ ತಂಬುಳಿ

ಉಣ್ಣಕ್ಕೊಂದು ತಂಬ್ಳಿ, ಹೊದೆಯಕ್ಕೊಂದು ಕಂಬ್ಳಿ.....perfect ನಾನ್ನುಡಿ for ಮಲೆನಾಡು. ಹೊರಗಡೆ ಧೋ ಅಂತ ಮಳೆ ಸುರೀತಾ ಇದ್ದರೆ, ಬಿಸಿ ಬಿಸಿ ಅನ್ನ, ತಂಬ್ಳಿ ಊಟ ಮಾಡಿ, ಸಂಜೆ ತನಕ ಬೆಚ್ಚಗೆ ಮಲ್ಕೋ ಬಹುದು.
ಪಡುವಳಕಾಯಿಯ ಪಲ್ಯ ಎಲ್ಲರಿಗೂ ಗೊತ್ತು!! ಪಡವಳಕಾಯಿ ಬೀಜದ ತಂಬುಳಿ???ಗೊತ್ತಿದ್ದರೆ ok. ಇಲ್ಲದಿದ್ದರೆ ಒಂದು ಸಲ try ಮಾಡಿ ನೋಡಿ!!!
ಎರಡು ಪಡವಳ ಕಾಯಿಯನ್ನು ಉದ್ದಕ್ಕೆ ಕತ್ತರಿಸಿ, ಅದರಿಂದ ಬೀಜಗಳನ್ನು ಬೇರ್ಪಡಿಸಿ.
1 ಟೇಬಲ್ ಚಮಚ ಎಣ್ಣೆಯಲ್ಲಿ, ಈ ಬೀಜಗಳನ್ನು ನಸು ಕಂದು ಬಣ್ಣ ಬರುವ ತನಕ ಹುರಿಯಿರಿ. ಬೀಜಗಳನ್ನು ಎಣ್ಣೆಯಿಂದ ತೆಗೆದಿಡಿ. ಉಳಿದ ಎಣ್ಣೆಯನ್ನು ಒಗ್ಗರಣೆಗೆ ಬಳಸಿ.


1 tablespoon ತೆಂಗಿನ(ತಾಜಾ) ತುರಿಯನ್ನು ೪ ಹುರಿದ ಒಣ ಕೆಂಪು ಮೆಣಸು, ಚಿಕ್ಕ ತುಂಡು ಹುಣಸೆ ಹುಳಿ ಮತ್ತು ಉಪ್ಪಿನೊಂದಿಗೆ ನುಣ್ಣಗೆ ರುಬ್ಬಿ. ಬಡಿಸುವ ಮುನ್ನ ತಂಬಳಿಗೆ ಸಾಸಿವೆ ಕರಿಬೇವಿನ ಒಗ್ಗರಣೆ ಹಾಕಿ ಹುರಿದಿಟ್ಟ ಬೀಜಗಳನ್ನು ಸೇರಿಸಿ. ಬಿಸಿ ಬಿಸಿ ಅನ್ನದೊಂದಿಗೆ ಮಸ್ತ್ ಮಜಾ


ಕೊಂಕಣಿಯವರು ಏನನ್ನು ಬಿಡದೇ ತಿನ್ನುತ್ತಾರೆ ಎನ್ನುವ ಪ್ರತೀತಿ ಇದೆ. ಹಾಗೆ ನೋಡಿದರೆ ತರಕಾರಿಗಳ ಸತ್ವ ಇರುವುದೇ ಅದರ ಸಿಪ್ಪೆ ಬೀಜಗಳಲ್ಲಿ. ನಾನು ಬಟಾಟೆ,/ಆಲುಗಡ್ಡೆ, ಕ್ಯಾರೆಟ್ ವಗೈರೆ ಬಳಸುವಾಗ ಅದರ ಸಿಪ್ಪೆಯನ್ನು ತೆಗೆಯುವುದಿಲ್ಲ. ನೀರಿನಲ್ಲಿ ಸ್ವಲ್ಪ ಹೊತ್ತು ಈ ತರಕಾರಿಗಳನ್ನು ಇಟ್ಟು ಬಿಟ್ಟರೆ, ಅದರ ಸಿಪ್ಪೆಗೆ ತಾಗಿದ ಮಣ್ಣು ಎಲ್ಲ ಹೋಗಿ ಕ್ಲೀನ್ ಆಗಿರುತ್ತದೆ.
ಪಡವಳಕಾಯಿ ಮಾತ್ರವಲ್ಲ ಅದರ ಎಲೆಯ ಕಶಾಯವನ್ನು ಮಾಡುತ್ತಾರೆ. ಅಜೀರ್ಣದ ತೊಂದರೆಯಿದ್ದರೆ, ಹೊಟ್ಟೆ ಹುಣ್ಣು, ನಂಜು ಮುಂತಾದುವಕ್ಕೆ ಈ ಕಶಾಯ (Decoction)ಉತ್ತಮ.
(watch this space for ಪಡುವಳಕಾಯಿ ಕಟ್ಲೆಟ್)

No comments: