Tuesday, October 22, 2013

ದಪ್ಪ ಮೇನಸಿನ ಮೊಸರು ಬಜ್ಜಿ

ಈ recipe ನನಗೆ ಹೇಳಿ ಕೊಟ್ಟಿದ್ದು ನನ್ನ ತಮ್ಮನ ಹೆಂಡತಿ ದೀಪಾ ಪೈ. ದೀಪ ಹುಟ್ಟಿದ್ದು ಮುಂಬೈನಲ್ಲಾದರೂ ಬೆಳೆದದ್ದು ಗುಜರಾತ ನ ವಡೋದರಾ (Baroda) ದಲ್ಲಿ. ಬಹುಶ: ಈ ಪದಾರ್ಥ ಅಲ್ಲಿ ಮಾಡುತ್ತಾರೇನೋ ಗೊತ್ತಿಲ್ಲ. ಅವಳು ಇಲ್ಲಿ ಬೆಂಗಳೂರಿಗೆ ಬಂದಾಗ ಒಂದು ಸಲ ಮಾಡಿದ್ದಳು. ನಮಗೆಲ್ಲ ತುಂಬ ಇಷ್ಟ ಆಯ್ತು. ಈಗ ಹದಿನೈದು ದಿನಕ್ಕೊಮ್ಮೆ ಈ dish ಮಾಡುತ್ತಿರುತ್ತೇನೆ. ದೀಪಾಳ ಅಮ್ಮ ಮತ್ತು ನಮ್ಮ ಅಮ್ಮ ಫ್ರೆಂಡ್ಸ್. ಪ್ರತೀ ಬೇಸಿಗೆ ರಜೆಯಲ್ಲಿ ಅವರು ಮುಂಬೈಗೆ ನಮ್ಮ ಮನೆಗೆ ಬರುತ್ತಿದ್ದರು. ನನ್ನ ತಮ್ಮ ಕೃಷ್ಣ ಅವಳನ್ನು ಸೈಕಲ್ ಮೇಲೆ ರೌಂಡ್ ಗೆ ಕರೆದುಕೊಂಡು ಹೋಗುತ್ತಿದ್ದ. ಕನಸು ಮನಸಲ್ಲೂ ಅವಳು ನನ್ನ ತಮ್ಮನ ಹೆಂಡತಿಯಾಗುತ್ತಾಳೆಂದು ಅಂದುಕೊಂಡಿರಲಿಲ್ಲ. ಚಿಕ್ಕವಳಿದ್ದಾಗ ಅವಳು ನನಗೆ ಮಾಲತಿಯಕ್ಕ ಅನ್ನುತ್ತಿದ್ದದ್ದು ಈಗಲೂ ನಾನು ಅವಳಿಗೆ ಮಾಲತಿಯಕ್ಕ...ದೀಪಾ ಗುಜರಾತಿ accent ನಲ್ಲಿ ಕೊಂಕಣಿ ಮಾತನ್ನಾಡುವುದು ಗಮ್ಮತ್ತಿರುತ್ತದೆ. ಅವಳು ಒಂದು ವಾಕ್ಯ ಮಾತಾಡಿ ಅದು ನನ್ನ ಮೆದುಳಿಗೆ ತಲುಪಿ process ಆಗುವಷ್ಟರಲ್ಲಿ ಅವಳು ಇನ್ನೊಂದು ವಾಕ್ಯ ಹೇಳಿರುತ್ತಾಳೆ...so ನಾವು ಹಿಂದಿಯಲ್ಲಿ ಮಾತನಾಡುವುದು. ಆದರೆ ತಮ್ಮನ ಮಗಳು ಮಿಹಿಕಾ ಹುಟ್ಟಿದ್ದು ಮುಂಬೈನಲ್ಲಿ, ಅವಳು ಮರಾಠಿ accent ನಲ್ಲಿ ಕೊಂಕಣಿ ಮಾತನಾಡುತ್ತಾಳೆ...... ಮತ್ತು ಯು.ಎಸ್. ನಲ್ಲಿರುವ  ನನ್ನ ತಂಗಿ ಮಕ್ಕಳು ಕೊಂಕಣಿ ಅಮೇರಿಕನ್ accent ನಲ್ಲಿ ಮಾತಾಡುವುದು ಮಜವಾಗಿರತ್ತೆ. ಕೊಂಕಣಿಯಲ್ಲೇ ಮಾತಾಡುವುದು ಅವಳು ಕಡ್ಡಾಯವಾಗಿಸಿದ್ದಾಳೆ....ಒಟ್ಟಿಗೆ ಗಮ್ಮತ್ತು... .ಹ್ಮ್ಮ್ recipe ಅಂಥೇಳಿ ಎಲ್ಲೆಲಿಗೋ ಹೊಗ್ತಾ ಇದೆ ವಿಷಯ....

ದೊಣ್ಣ ಮೆಣಸು /capsicum/ ದಪ್ಪ ಮೆಣಸಿನ ಮೊಸರು ಬಜ್ಜಿ:

ಸೆಕೆಗೆ ಸಖತ್...taste bhi health bhi ..easy bhi

2-3 ಹದ ಗಾತ್ರದ  ಕ್ಯಾಪ್ಸಿಕಮ್...ಸಣ್ಣಗೆ ಕತ್ತರಿಸಿದ್ದು

ಎರಡು ಗ್ಲಾಸ್ ಮೊಸರು..ಸ್ವಲ್ಪ ಸಿಹಿ ಇದ್ರೆ ಒಳ್ಳೆಯದು

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು, ಜೀರಿಗೆ, ಮೆಂತೆ, ಹಿಂಗಿನ ಪುಡಿ, ಸಣ್ಣಗೆ ಕತ್ತರಿಸಿದ ಹಸಿಮೆಣಸಿಕಾಯಿ (ಬೇಕಾದರೆ ಮಾತ್ರ) ಇದೇ ಆರ್ಡರ್ ನಲ್ಲಿ ಒಗ್ಗರಣೆ ತಯಾರುಮಾಡಿ...

ಒಗ್ಗರಣೆಯಲ್ಲಿ ಸಣ್ಣಗೆ ಕತ್ತರಿಸಿದ ದಪ್ಪ ಮೆಣಸನ್ನು , ಉಪ್ಪುಹಾಕಿ, ಸ್ವಲ್ಪ ಹೊತ್ತು ಬಾಡಿಸಿ .(crunchy ಆಗಿರಬೇಕು) ಆರಿದ ಮೇಲೆ ಮೊಸರು ಬೆರೆಸಿ.

ಚಪಾತಿ, ಅನ್ನ ಅಥವ stand alone ಸಲಾಡ್ ತರಹನೂ ತಿನ್ನಬಹುದು.

(ಬೆಂಡೆಕಾಯಿ ಸ್ವಲ್ಪ ಎಣ್ಣೆ ಹಾಕಿ 30 ಸೆಕೆಂಡ್ಸ್ ಮೈಕ್ರೋ ವೇವ್ ನಲ್ಲಿಟ್ಟು  ಮೇಲಿನಂತೆ ಮಾಡಿದರೂ ಚೆನ್ನಾಗಿರುತ್ತೆ.)

so stay cool this summer with this simple dish

enjoy
:-)
(ಫೋಟೊ ನಾನೆ ತೆಗೆದದ್ದು ನಿಹಾ ಕ್ಯಾಮರಾದಿಂದ...ಅವಳಷ್ಟು creativity ನನಗಿಲ್ಲ...so there!!!!!!) :-

No comments: