Tuesday, October 22, 2013

ಉಪ್ಪಿಗೆ ಹಾಕಿದ ಹಲಸಿನ ತೊಳೆ ಪಲ್ಯ

ಪಲ್ಯ ಮಾಡುವ ದಿನ ಕೆಲವು ತೊಳೆಗಳನ್ನು ಸ್ವಚ್ಛವಾದ ನೀರಿನಲ್ಲಿ ಹಾಕಿಡಿ. ಇದರಿಂದ ತೊಳೆಗಳಲ್ಲಿ ಇದ್ದಂತಹ ಹೆಚ್ಚಿನ ಉಪ್ಪಿನಂಶ ತೆಗೆದ ಹಾಗಾಗುತ್ತದೆ.
ಉಪ್ಪು ನೀರಿನಿಂದ ತೆಗೆದಿಟ್ಟ ತೊಳೆಗಳು

ಆ ಮೇಲೆ ಹೀಗೆ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಪುನಃ ನೀರಿನಲ್ಲಿ ಹಾಕಿಡಿ.ನಾನು ಮೂರು ನಾಲ್ಕು ಗಂಟೆ ನೀರಿನಲ್ಲಿ ಹಾಕಿಡುತ್ತೇನೆ.

ಒಗ್ಗರಣೆಗೆ : ಎಣ್ಣೆ, ಸಾಸಿವೆ, ಹಿಂಗು ನೀರು, ಕೆಂಪು ಒಣ ಮೆಣಸಿನಕಾಯಿ...ಉಪ್ಪು ಹಾಕಬೇಡಿ.ಒಗ್ಗರಣೆ ರೆಡಿಯಾದ ಮೇಲೆ ನೀರಿನಲ್ಲಿ ಹಾಕಿಟ್ಟ ಕತ್ತರಿಸಿದ ತೊಳೆಗಳನ್ನು ಗಟ್ಟಿಯಾಗಿ ಹಿಂಡಿ ಒಗ್ಗರಣೆಯಲ್ಲಿ ಹಾಕಿ.  ಸ್ವಲ್ಪ ನೀರು ಹಾಕಿ ಬೇಯಿಸಿ. ಕೊನೆಯಲ್ಲಿ ಬೇಕಿದ್ದಲ್ಲಿ ಕಾಯಿ ತುರಿ ಬೆರೆಸಬಹುದು. ಕೊಂಕಣಿಗಳ fav dish. ದಾಳಿತೊವ್ವೆ ಜತೆ terrific ಕೊಂಬಿನೇಶನ್ ಮಾಲವಿಕ ಳ ಪ್ರಕಾರ.

ಪಲ್ಯ ಇನ್ನೊಂದು ರೀತಿ:
ಎಣ್ಣೆ, ನಾಲ್ಕೈದು ಜಜ್ಜಿದ ಬೆಳ್ಳುಳ್ಳಿ ಎಸಳು, ಕೆಂಪು ಮೆಣಸಿನಕಾಯಿ..ಉಳಿದ method ಮೇಲಿನ ಹಾಗೆ. ಕಾಯಿ ಹಾಕಬೇಕಾಗಿಲ್ಲ. ಹೊರಗೆ ಧೋ ಅಂತ ಮಳೆ ಸುರೀತಿದ್ರೆ, ಕೆಂಪಕ್ಕಿ (ಕುಚ್ಚಲಕ್ಕಿ) ಅನ್ನದ ಗಂಜಿ + ತುಪ್ಪ + ಹಲಸಿನ ತೊಳೆ ಪಲ್ಯ...ಯಾರಿಗುಂಟು ಯಾರಿಗಿಲ್ಲ??
ಅಂದ ಹಾಗೆ ಪಲ್ಯದ ಚಿತ್ರ ಎಲ್ಲಿ ಅಂದ್ರಾ?? ಅದು ತಿಂದು ಖಾಲಿಯಾದ ಮೇಲೆ ಫೋಟೊ ತೆಗಿಲಿಲ್ಲ ಅಂತ ನೆನಪಾಯ್ತು. ಇಲ್ಲಿ ಹಾಕಿದ ಚಿತ್ರ ನನ್ನಲ್ಲಿದ್ದ ಕೊನೆಯ stock!! ನಾವು ಈ ಪಲ್ಯ ಮಾಲವಿಕ/ನಿಹಾ ಗೆ ತಿನ್ನುವ ಮೂಡ್ ಬಂದಾಗಲೆಲ್ಲ ಮಾಡುತ್ತಿರುತ್ತೇವೆ...ಮಳೆಗಾಲಕ್ಕೆ ಕಾಯಲ್ಲ...ಮುಂದಿನ ಸಲ ನೆನಪಿನಿಂದ ಫೋಟೊ ಹಾಕುತ್ತೇನೆ.

No comments: