Tuesday, October 22, 2013

ವಸ್ತಾದ್ ರೊಟ್ಟಿ

ವಸ್ತಾದ್ ರೊಟ್ಟಿ ಮಾಡುವ ವಿಧಾನ

ಒಂದು ಕಪ್ ಮೈದಾ, ಎರಡು ದೊಡ್ಡ ಚಮಚೆ ಮೊಸರು, ಅರ್ಧ ಟೀ ಸ್ಪೂನ್ ಅಡಿಗೆ ಸೋಡಾ, ಒಂದು ಟೀ ಸ್ಪೂನ್ ಜೀರಿಗೆ, ಮಿಕ್ಸಿಯಲ್ಲಿ ಹಾಕಿದ ಎರಡು ಹಸಿ ಮೆಣಸು, ಉಪ್ಪು , ಚಿಟಿಕೆ ಸಕ್ಕರೆ
ಮೊದಲಿಗೆ ಮೊಸರಿನಲ್ಲಿ ಉಪ್ಪು ಸಕ್ಕರೆ ಮತ್ತು ಸೋಡಾ ಪುಡಿ ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ. ಅದು ಬುರುಗು ಬರುತ್ತೆ. ಇದಕ್ಕೆ ಹಸಿಮೆಣಸಿನಕಾಯಿಯ ಪೇಸ್ಟ್ ಬೆರೆಸಿ, ಆಮೇಲೆ ಜೀರಿಗೆ, ಕೊನೆಯಲ್ಲಿ ಮೈದಾ ಬೆರೆಸಿ, ನೀರು ಹಾಕಿ ತುಂಬಾ ಅಂದ್ರೆ ತುಂಬಾsssss ಮೆತ್ತಗಿನ ಕಣಕ (dough)ತಯಾರಿಸಿ. 6 ಗಂಟೆಗಳ ಕಾಲ ಇದನ್ನು ಹುದುಗಲು ಬಿಡಿ. ನಾನು ರಾತ್ರಿ ಹಿಟ್ಟು ತಯಾರಿಸಿ ಬೆಳಗ್ಗೆ ಈ ರೊಟ್ಟಿಯನ್ನು ತಯಾರಿಸುವುದು.


6 ಗಂಟೆಗಳ ನಂತರ ಹಿಟ್ಟು ಉಬ್ಬಿ ಎರಡರಷ್ಟಾಗುತ್ತದೆ. ಹಿಟ್ಟಿನ ದೊಡ್ಡ ಗಾತ್ರದ ಉಂಡೆ ಮಾಡಿ. ಸ್ವಲ್ಪವೆ ತಟ್ಟಿ ಕಾವಲಿಯ ಮೇಲೆ ಚಪಾತಿ ತರಹ ಬೇಯಿಸಿ. ಮೊದಲಿಗೆ ಸ್ವಲ್ಪ ಹೊತ್ತು ಮುಚ್ಚಿ ಬೇಯಿಸಿ, ರೊಟ್ಟಿ ಚೆನ್ನಾಗಿ ಉಬ್ಬುತ್ತೆ. ಆಮೇಲೆ ಎಣ್ಣೆ ಹಾಕಿ ಕವುಚಿ ಹಾಕಿ. ಎರಡು ಬದಿ ಕೆಂಪಾಗುವವರೆಗೆ ಬೇಯಿಸಿ. ಒಳಗಡೆ ಸಾಫ್ಟ್ ಬನ್ ತರಹ ಆಗುತ್ತೆ
ಇದನ್ನು ಬಿಸಿ ಬಿಸಿ ಇದ್ದಾಗ ಬೆಣ್ಣೆ ಮೆತ್ತಿ ತಿನ್ನ ಬಹುದು ಅಥವಾ ಮಾಲವಿಕಾಳ fav ದಾಲ್ ತೊವ್ವೆ ಜತೆ. ನಿಹಾಳ ಫ್ರೆಂಡ್ಸ್ ಗೆ ಇದು ತುಂಬಾ ಇಷ್ಟ ಆಗಿದೆ. ನೀವು ಮಾಡಿ ನೋಡಿ. ಹೇಗೂ ರಜೆಗಳ ಸಾಲು. ನೀರುಳ್ಳಿಗೂ ರೇಟ್ ಏರಿದೆ. ಹಾಗಾಗಿ ಬ್ರೇಕ್ ಫಾಸ್ಟ್ ಗೆ  ರೂಟಿನ್ ದೋಸೆ, ಉಪ್ಪಿಟ್ಟು, ಪೂರಿ-ಪಲ್ಯ ದಿಂದ ಚೆಂಜ್ ಇರುತ್ತೆ. ಇದನ್ಯಾಕೆ ಟ್ರೈ ಮಾಡಬಾರದು?
ತಿಂದಾದ ಮೇಲೆ ’ಅರೇ ಹುಜುರ್ ವಾಹ್ ಉಸ್ತಾದ್ ನಹೀಂ ವಾಹ್ ’ವಸ್ತಾದ್’ ಬೊಲಿಯೇ ಅನ್ನಲು  ಹರಕತ್ ಇಲ್ಲ..:-) :-)

No comments: